ಸುಸ್ವಾಗತ - ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ
ಕನ್ನಡದಲ್ಲಿ ಶಿಕ್ಷಣವನ್ನು ಪಡೆಯಲು ಹಾತೊರೆಯುತ್ತಿರುವ ಮುಂಬೈ ಕನ್ನಡಿಗರಿಗಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವ ಏಕೈಕ ಉದ್ದೇಶದಿಂದ ಎನ್.ಕೆ.ಇ.ಎಸ್ .ಶಾಲೆಯನ್ನು 1939 ರಲ್ಲಿ ಮುಂಬೈ ಮಹಾನಗರದಲ್ಲಿ ಸ್ಥಾಪಿಸಲಾಯಿತು.
ಎನ್.ಕೆ.ಇ.ಎಸ್. ಶಾಲೆಯು ಮಹಾರಾಷ್ಟ್ರ ಸರಕಾರದಿಂದ ಗುರುತಿಸಲ್ಪಟ್ಟಿದ್ದು ಶಾಲೆಯು ಪೂರ್ವ ಪ್ರಾಶಮಿಕ, ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗಗಳನ್ನು ಹೊಂದಿದ್ದು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸಹ ಶಿಕ್ಷಣವನ್ನು ನೀಡುತ್ತಿದೆ. ಮಗುವಿಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತಿಳುವಳಿಕೆಯನ್ನು ನೀಡಿ ಎನ್.ಸಿ.ಸಿ , ಎಮ್.ಸಿ.ಸಿ, ಆಟೋಟ ,ನಾಟಕೀಕರಣ ಇತ್ಯಾದಿಗಳಲ್ಲಿ ತರಬೇತಿಯನ್ನಿತ್ತು ಅವರಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳನ್ನು ಹೊರತೆಗೆದು ಅವರ ಸರ್ವತೋಮುಖ ಬೆಳವಣಿಗೆಗೆ ಶಾಲೆಯು ಕಾರಣವಾಗಿದೆ ಎಂಬವುದನ್ನು ತೋರಿಸಿದೆ.
ಎನ್.ಕೆ.ಇ.ಎಸ್. ಸಂಸ್ಥೆಯು ಯಾವುದೇ ಜಾತಿ ಅಥವಾ ಧರ್ಮದ ಬೇಧವಿಲ್ಲದೆ ಎಲ್ಲಾ ಧರ್ಮದ ಜನರಿಗಾಗಿ ತೆರೆದಿದ್ದು ಶಾಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುವ ನಿಯಮಿತ ಅಧ್ಯಯನಗಳು ಮತ್ತು ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಪಾಲಕರಿಂದ ಸಂಪೂರ್ಣವಾದ ಸಹಕಾರವನ್ನು ನಿರೀಕ್ಷಿಸಲಾಗಿದೆ. ಅದೂ ಅಲ್ಲದೆ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಮತ್ತು ಉಚ್ಛ ಮಾಧ್ಯಮಿಕ ಶಿಕ್ಷಣ ಮಂಡಳಿಯವರು ನಡೆಸುತ್ತಿರುವ ಮಾಧ್ಯಮಿಕ ಶಾಲಾ ಪ್ರಮಾಣಪತ್ರ ಪರೀಕ್ಷೆಗೆ ತಕ್ಕಂತೆ ತರಬೇತಿಯನ್ನು ನೀಡಲಾಗುತ್ತಿದೆ.