ಶಿಕ್ಷಣದ ಹೊರತು

ರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕನ್ನಡ ಕಲಾಕೇಂದ್ರ ಮುಂಬೈ 2009 ಏಪ್ರಿಲ್‌ನಲ್ಲಿ ಆಯೋಜಿಸಿದ ನಾಟಕ ಕಾರ್ಯಾಗಾರದಲ್ಲಿ ಶಾಲಾ ಶಿಕ್ಷಕರು ಶರಣರ ಮೇಳ ಎಂಬ ಸಂಗೀತ ನಾಟಕವನ್ನು ಹಾಗೂ ವಿದ್ಯಾರ್ಥಿಗಳು ಡಾ.ಬಿ.ವಿ.ಕಾರಂತರು ರಚಿಸಿದ ನೀಲಿ ಕುದುರೆ ಎಂಬ ನಾಟಕವನ್ನು ರಂಗದ ಮೇಲೆ ಆಡಿತೋರಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರು ಡಾ.ಬಿ.ವಿ.ರಾಜಾರಾಂರವರು ನಿರ್ದೇಶಿಸಿದ ಹಾಸ್ಯ ನಾಟಕ ಶ್ರೀ ಕೃಷ್ಣ ಸಂಧಾನವನ್ನು ಅಭಿನಯಿಸಿ ತೋರಿಸಿದರು.

ಕ್ರೀಡೆ:-

 

"ಆಟವಿಲ್ಲದೆ ಕೇವಲ ಪಾಠದಿಂದ ಜಾನ್ ದಡ್ಡ ಹುಡುಗನಾದ" ಎಂಬ ಇಂಗ್ಲೀಷ್ ನುಡಿಮುತ್ತಿನಂತೆ ಕ್ರೀಡೆ ಎನ್ನುವ ಈ ಶಬ್ದವು ವಿದ್ಯಾರ್ಥಿಗಳಿಗೆ ಉತ್ತಮ ಪ್ರೇರಣೆಯನ್ನು ನೀಡುವ ಹಾಗೂ ಅವರನ್ನು ಕಾರ್ಯ ಪ್ರವೃತ್ತರನ್ನಾಗಿಸುವ ಮುಖ್ಯ ವಿಷಯವಾಗಿದೆ. ನಮ್ಮ ಶಾಲೆಯ ವಾರ್ಷಿಕ ಕ್ರೀಡೋತ್ಸವವು ವಿ.ಜೆ.ಟಿ..ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಅದರಲ್ಲಿ ಓಟ, ಎಸೆತ ಹಾಗೂ ಜಿಗಿತಗಳು ಒಳಗೊಂಡಿತ್ತು.

ನಮ್ಮ ವಿದ್ಯಾರ್ಥಿಗಳು ವಾಲಿಬಾಲ್‌, ಚದುರಂಗ, ಕುಸ್ತಿ,ಕರಾಟೆ, ತ್ವೆಕಾಂಡೊ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಲಯ ಮಟ್ಟ, ಜಿಲ್ಲಾ ಮಟ್ಟ, ಹಾಗೂ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

5 ರಿಂದ 7ನೇ ತರಗತಿಯವರೆಗೆ ಕಬಡ್ಡಿ ಹಾಗೂ 8 ಮತ್ತು 9ನೇ ತರಗತಿಯವರೆಗೆ ವಾಲಿಬಾಲ್ ಮತ್ತು ಹ್ಯಾಂಡ್‌ಬಾಲ್‌ ಗಳಲ್ಲಿ ತರಬೇತಿ ಮತ್ತು ಸ್ಪರ್ಧೆಯನ್ನು ಏರ್ಪಡಿಸುವುದಲ್ಲದೆ ಕುಸ್ತಿ, ಡಂಬಲ್ಸ್ , ಲೇಝಿಮ್, ಆರೋಬಿಕ್‌ ಮತ್ತು ಮಾನವ ಪಿರಾಮಿಡ್‌ ಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ.

ಏಪ್ರಿಲ್ 2009 ರಂದು ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದ್ದು 14 ವಯಸ್ಸಿನ ಕೆಳಗಿನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ವೈಯಕ್ತಿಕವಾಗಿ ಹಾಗೂ ಅವರ ಆಸಕ್ತಿಯ ವಿಷಯಗಳಿಗನುಗುಣವಾಗಿ ನೀಡಲಾಗಿದೆ. ಕ್ರೀಡಾ ಪ್ರಬೋಧಿನಿ ಪರೀಕ್ಷೆಯು ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ.

 

ಆಚರಣೆಗಳು:

ಶಾಲೆಯಲ್ಲಿ ಗಣೇಶೋತ್ಸವ, ಸರಸ್ವತಿ ಪೂಜೆ, ಸ್ಥಾಪಕರ ದಿನದಂದು ಸತ್ಯನಾರಾಯಣ ಪೂಜೆ ಇದು ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯ ಮನೋಭಾವನೆಯನ್ನು ಮೂಡಿಸುವುದು. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯ ದಿನದಂದು ಪ್ರಭಾತ ಫೇರಿಯನ್ನು ಆಯೋಜಿಸಲಾಗುವುದು. ವಿದ್ಯಾರ್ಥಿಗಳು ಸಂಗ್ರಹಿಸಿದ 1,75,000 ರೂಪಾಯಿಗಳನ್ನು ಮಾರ್ಟಿ ಅಜಿತ್ ಗಾಂವಕರ್ ಕುಟುಂಬದವರಿಗೆ ಕೊಡಲಾಯಿತು. ವಿಶ್ವೇಶ್ವರಯ್ಯ ದಿನದಂದು ರಸಪ್ರಶ್ನೆ ಸ್ಪರ್ಧೆ ಮತ್ತು ಪರಿಸರ ಮಾಲಿನ್ಯ , ಸಾರಿಗೆ ಮತ್ತು ಸಂಪರ್ಕ ಹಾಗೂ ಸೂಕ್ಷ್ಮಾಣು ಜೀವಿಗಳ ಕುರಿತಾಗಿನ ವಿಷಯಗಳ ಕುರಿತು ಪ್ರಕಲ್ಪ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಪ್ರತಿಭಾ ಸ್ಪರ್ಧೆಯನ್ನು ನವಂಬರ್ 14ರಂದು ಹಾಗೂ ಬಾಲಿಕಾ ದಿನವನ್ನು ಜನವರಿ 4ರಂದು ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಗುಣಗಳು ಬೆಳೆದು ಬರಲು ಇಂತಹ ಆಚರಣೆಗಳು ಸಹಕರಿಸುತ್ತದೆ.

ಸಹಪಠ್ಯ ಚಟುವಟಿಕೆಗಳು/ ಸ್ಪರ್ಧೆಗಳು:

ಸಹಪಠ್ಯ ಚಟುವಟಿಕೆಗಳು ಸಂಪೂರ್ಣ ಶಿಕ್ಷಣದ ಒಂದು ಅಂಗವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೊರಗೆ ತೆಗೆಯುತ್ತದೆ, ಇದಲ್ಲದೆ ಕನ್ನಡ, ಇಂಗ್ಲೀಷ್‌ , ಹಿಂದಿ ಮತ್ತು ಮರಾಠಿಗಳಲ್ಲಿ ನಿಬಂಧ, ಭಾಷಣ, ಕಥೆ ಹೇಳುವ ಸ್ಪರ್ಧೆ, ಕಂಠಪಾಠ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಮಾನಸಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ, ರಂಗೋಲಿ, ಚಿತ್ರಕಲೆ, ಹೂ ಜೋಡಣೆ, ಭಾವಗೀತೆ , ಸಮೂಹಗೀತೆ, ಛದ್ಮವೇಷ, ಜಾನಪದ ನೃತ್ಯ, ಮೆಹಂದಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಈ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಲು ಕಾರಣವಾಯಿತು.

 

ಅಂತರ ಶಾಲಾ ಪ್ರತಿಭಾ ಸ್ಪರ್ಧೆ-2011-12

1. ಗುರು ನಾರಾಯಣ ರಾತ್ರಿ ಶಾಲೆ

ಭಾಷಣ -ಸಿದ್ದು ಪಸಾರ್ 10c ಮೊದಲಬಹುಮಾನ

ಏಕಪಾತ್ರಾಭಿನಯ - ರೋಹಿತ್ ಹುಂಜನೂರ್ 9 d ತೃತೀಯ ಬಹುಮಾನ

 

2. ವಿದ್ಯಾ ಪ್ರಸಾರಕ ಮಂಡಳಿ

ಭಾಷಣ -ಪ್ರಿಯಾಂಕ ಶೆಟ್ಟಿ 10c ಮೊದಲ ಬಹುಮಾನ ಮತ್ತು ಚಲಿತ ಫಲಕ್‌

 

3. ಕರ್ನಾಟಕ ಸಂಘ ಮಾಟುಂಗ

ಭಾಷಣ -ಪ್ರಿಯಾಂಕ ಶೆಟ್ಟಿ 10c ಮೊದಲ ಬಹುಮಾನ ಮತ್ತು ಚಲಿತ ಫಲಕ

ಏಕಪಾತ್ರಾಭಿನಯ -ರೋಹಿತ್ ಹುಂಜನೂರ್ 9d ತೃತೀಯ ಬಹುಮಾನ

 

4. ಬಂಟರ ಸಂಘ ಕುರ್ಲ

ಭಾಷಣ ಮಮತಾ ಕಾಂಬ್ಳೆ 10c ಪ್ರಥಮ ಬಹುಮಾನ

ಪ್ರಿಯಾಂಕ ಶೆಟ್ಟಿ 10c ದ್ವಿತೀಯ ಬಹುಮಾನ ಮತ್ತು ಚಲಿತ ಫಲಿಕ

ತುಳುಗೀತೆ ಹರ್ಷರಾಜ್ ಕೋಟ್ಯಾನ್ 9d ತೃತೀಯ ಬಹುಮಾನ

 

5. ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಚಿತ್ರಕಲಾ ಸ್ಪರ್ಧೆ

ಸುದರ್ಶನ ವಾಲಿ 10c ದ್ವಿತೀಯ ಬಹುಮಾನ

ಮೊಹನೀಶ ಶೆಟ್ಟಿ 9A ತೃತೀಯ ಬಹುಮಾನ

ಅಕ್ಷಯ ಮೇತ್ರಿ 9D ಸಮಾಧಾನಕರ ಬಹುಮಾನ

ಕರಣ ದೋಣಿ 8D ಸಮಾಧಾನಕರ ಬಹುಮಾನ

 

6. ವಿಜಯ ಬ್ಯಾಂಕ್ ಚಿತ್ರಕಲಾ ಸ್ಪರ್ಧೆ:

ಫರೀದ್ ಆಲಿ 9A ಪ್ರಥಮ ಬಹುಮಾನ

ಮನೋಜ್ ಗುಪ್ತಾ 8C ದ್ವಿತೀಯ ಬಹುಮಾನ

ಮಿನೀಚ್ ದೇವೇಂದ್ರ 7A ತೃತೀಯ ಬಹುಮಾನ

 

7.ಟಾಟಾ ಪವರ್ ಎನರ್ಜಿ ಕ್ಲಬ್‌ನ ಚಿತ್ರಕಲಾ ಸ್ಪರ್ಧೆ ಶಿಕ್ಷಣ ಮತ್ತು ತಿಳುವಳಿಕೆಯ ಕಾರ್ಯಕ್ರಮ:

ಮನೋಜ್ ಗುಪ್ತಾ 8C ಪ್ರಥಮ ಬಹುಮಾನ

ಮಂಡಲ್ ನಾಜಿಯಾ 6B ದ್ವಿತೀಯ ಬಹುಮಾನ

ಮೆರಿಲಿನ್‌ ದೇಸಾಯಿ 7D ತೃತೀಯ ಬಹುಮಾನ

 

8. ಅಪ್ಸರಾ ಕೊಲೋರಮಾ 43 ನೆ ಶ್ರೇಷ್ಠತೆಯ ಪ್ರಶಸ್ತಿ

ದೇವಕಿ ಬಸ್‌ರಾಜ್‌ 8D

ಸಂಪ್ರಿತ ಮೊಗವೀರ 5C

 

9. F/M ವಲಯ ಮಟ್ಟದ ವಿಜ್ಞಾನ ಪ್ರದರ್ಶನ

ಲಿಟಲ್ ವಂಜಿತ ಪ್ರೌಢಶಾಲೆಯಲ್ಲಿ ಜರುಗಿದ ಸ್ಪರ್ಧೆ

 

ಪ್ರಕಲ್ಪ - ಸವಿತಾ ನಾಗಾನಂದ 4ನೇ ಬಹುಮಾನ

ಬೋಧನೋಪಕರಣ , ರಾಮಾಚಾರ್ಯ ಪ್ರಥಮ ಬಹುಮಾನ

 

10. ಸನ್‌ಪೀಸ್ಟ್ ಪಾಸ್ತಾ ಚಿತ್ರಕಲಾ ಸ್ಪರ್ಧೆ

ಸಾಹೂ ಸುನೀತ 5B

ಶೇಖ್ ಶ್ವೆಝಾನ್ 6B

 

11. ನವನೀತ್ ಚಿತ್ರಕಲಾ ಸ್ಪರ್ಧೆ- 15-08-2012

ಮಿಸೆಬಾ ಪಟೇಲ್ 10A

ಸ್ವಪ್ನಾಲೀ ಶೇಡ್ ಕರ್ 9B

ಲಲಿತಾ ದೇಸಾಯಿ 9D

ಮೆರಿಲಿನ್ ದೇಸಾಯಿ 8D

ಪ್ರೇಮ್‌ ಜಿಲ್ಲೆ 9D

ಕರಣ ದೋಣಿ 9D

ರೋಹಿತ್ ಜೌರಾಸಿಯಾ 5B

ಪ್ರಾಚಿ ಶಾರ್ದೂಲ್‌ 5B

 

ಇತರ ಘಟನೆಗಳು:

ಪ್ರಕೃತಿಯು ಉತ್ತಮವಾದ ಗುರು. ವಿದ್ಯಾರ್ಥಿಗಳು ಮಾಹಿಮ್ ಪರಿಸರ ಉದ್ಯಾನವನ್ನು ವೀಕ್ಷಿಸಿದರು 5ರಿಂದ 7 ನೇ ತರಗತಿಯವರು ಗ್ರೇಟ್ ಎಸ್ಕೇಪ್‌ಗೂ 8 ಮತ್ತು 9 ನೇ ತರಗತಿಯವರು ಸೈಲೆಂಟ್‌ ರಿಸೋರ್ಟಿಗೂ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಲಾಗಿತ್ತು. 10ನೇ ತರಗತಿಯವರಿಗೆ ಬೀವ್‌ ಪುರಿಗೆ ಚಾರಣವನ್ನು ಹಾಗೂ ಶಾಲಾ ಶಿಕ್ಷಕರಿಗಾಗಿ ಕರ್ಜತ್‌ನ ಪ್ಯಾಪಿಲಾನ್ ಉದ್ಯಾನಕ್ಕೆ ಪ್ರವಾಸವನ್ನು ಏರ್ಪಡಿಸಲಾಗಿತ್ತು.