ಶಿಶು ಅಭಿವೃದ್ಧಿ ಮತ್ತು ಶಿಶು ಪಾಲನಾ ಕೇಂದ್ರ

ಶಿಶು ಅಭಿವೃದ್ಧಿ ಮತ್ತು ಶಿಶುಪಾಲನಾ ಕೇಂದ್ರದ ಗುರಿಯು 3ರಿಂದ 5 ವರ್ಷ ವಯಸ್ಸಿನ ಶಿಶುಗಳ ಅಭಿವೃದ್ಧಿಯನ್ನು ಮಾಡುವುದು. ಮತ್ತು ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಮಾಡುವುದಾಗಿದೆ. ಶಿಶುಗಳು ಮಾತುಕತೆ, ಆಟ, ಮತ್ತು ಸಂಭಾಷಣೆಯನ್ನು ಕಲಿಯುವರು. ತನ್ನ ಸುತ್ತ ಮುತ್ತಲ ಕುರಿತು ತಿಳಿಯಲು ಸಂಭಾಷಣೆ ಗುರುತಿಸುವುದು ಓದು ಬರೆಹ, ಹಾಗೂ ಮಾತನಾಡಲು ವಿವಿಧ ಚಟುವಟಿಕೆ ಮತ್ತು ಸಾಮಾಗ್ರಿಗಳನ್ನು ಪೂರೈಸುವ ಮುಖಾಂತರ ಶಿಕ್ಷಕರು ಅವರನ್ನು ಪ್ರೇರೇಪಿಸುವರು. ಅದೂ ಅಲ್ಲದೆ ಅವರಿಗೆ ವಿವಿಧ ಹಾಡು ನೃತ್ಯಗಳನ್ನು ಕಲಿಸಿ ಅವರಲ್ಲಿ ಪರಸ್ಪರ ಬೆರೆಯುವ ಮನೋಭಾವವನ್ನು ಬೆಳೆಯಲು ಪ್ರಯತ್ನಿಸುವರು ಶಿಕ್ಷಕರ ಸ್ನೇಹ ಮನೋಭಾವನೆಯಿಂದ ಶಿಶುಗಳು ಉತ್ತಮ ಹವ್ಯಾಸಗಳೊಂದಿಗೆ ಭಾಷಣ ಕಲೆಯನ್ನು ರೂಢಿಸಿಕೊಂಡು ಸತ್ಪ್ರಜೆಗಳಾಗಲು ಕಾರಣವಾಗುತ್ತದೆ.

ಪಠ್ಯ ಚಟುವಟಿಕೆಗಳು:
ಪಠ್ಯ ಚಟುವಟಿಕೆಗಳನ್ನು ಮಕ್ಕಳ ವಯೋಮಿತಿಗೆ ಅನುಗುಣವಾಗಿ ರೂಪಿಸಲಾಗಿದೆ. ಕಲಿಕೆಯು ಸಂಭಾಷಣೆಯ ಮುಖಾಂತರ ನಡೆಯುತ್ತದೆ.  ಮಗು ಕೇಂದ್ರಿತ ಶಿಕ್ಷಣವನ್ನು ಕೊಡುವುದರೊಂದಿಗೆ ವರ್ಗೀಕೃತ ಮಾದರಿಯಲ್ಲಿ ಗುಣಗಳನ್ನು ಕೊಡಲಾಗುವುದು. ವಿವಿಧ ರೀತಿಯ ಆಟಗಳ ಮುಖಾಂತರ ಮಕ್ಕಳನ್ನು ಚಟುವಟಿಕೆ ಹಾಗೂ ಜವಾಬ್ದಾರಿಯುತರನ್ನಾಗಿಸಲು  ಕಾರಣವಾಗುತ್ತದೆ. ಈ ಚಟುವಟಿಕೆಗಳನ್ನು ಬಾಯ್ದೆರೆಯ ಪದ್ದತಿ, ಸಂಖ್ಯಾತ್ಮಕ ಪದ್ದತಿ ಹಾಗೂ ಪ್ರಸಿದ್ಧ ಮೂಲಾಂಶಗಳು ಮತ್ತು ಕವಿತೆಯ ಮುಖಾಂತರ ರಚಿಸಲಾಗಿದೆ.

ಪಠ್ಯ ಚಟುವಟಿಕೆಗಳ ಗುರಿ:
* ಯಶಸ್ವಿ ಕಲಿಯುವಿಕೆ
* ವೈಯಕ್ತಿಕ ಆತ್ಮ ವಿಶ್ವಾಸ
* ಜವಾಬ್ದಾರಿಯುತ ನಾಗರಿಕ
* ಪರಿಣಾಮಕಾರಿ ಹಂಚಿಕೆದಾರ
* ಗುಂಪಿನ ಉತ್ತಮ ಸದಸ್ಯ.

ಉದ್ಧೇಶಗಳು:
* ಉತ್ತಮ ಹಾಗೂ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಲು ಮಕ್ಕಳಿಗಾಗಿ ಮಾತನಾಡುವ, ತಿನ್ನುವ, ವಸ್ತ್ರ ಧರಿಸುವ ಹಾಗೂ    ಆಟವಾಡುವ ಹವ್ಯಾಸವನ್ನು ತಿಳಿಸಿಕೊಡುವುದು.
* ಸಾಮಾಜಿಕ ಮನೋಭಾವ , ವರ್ತನೆಗಳಲ್ಲಿ ಆರೋಗ್ಯಕರವಾಗಿ ಭಾಗವಹಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸುವುದು.
* ಸಂಗೀತ ನೃತ್ಯ, ಚಿತ್ರಕಲೆ,  ಹಾಗೂ ಬಣ್ಣ ಚಿತ್ರದಲ್ಲಿ ಮಕ್ಕಳನ್ನು ಪ್ರಶಂಸಿಸುವ  ಮುಖಾಂತರ ಪ್ರೋತ್ಸಾಹಿಸುವುದು.
* ಮಗುವಿನ ಬುದ್ಧಿಮತ್ತೆಯ ಕುತೂಹಲವನ್ನು ಹುರಿದುಂಬಿಸಿ ಅದಕ್ಕೆ ಸರಿಯಾದ ಉತ್ತರವನ್ನು ಕೊಡುವುದು.
* ಸ್ವತಂತ್ರವಾಗಿ ಹಾಗೂ ಸೃಜನಾತ್ಮಕವಾಗಿರಲು ಮಗುವಿಗೆ ಒದಗಿಸಿರುವ ಅವಕಾಶಗಳನ್ನು ಪ್ರೋತ್ಸಾಹಿಸುವುದು.