ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ ‍ಬಗ್ಗೆ

ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯು ಭಾಷಾವಾರು ಅಲ್ಪಸಂಖ್ಯಾತ ಸಂಸ್ಥೆಯಾಗಿದ್ದು ವಡಾಲದ ಮಧ್ಯಭಾಗದಲ್ಲಿರುವ ಇಂದೂಲಾಲ್ ಭುವಾ ಮಾರ್ಗದಲ್ಲಿ ಶಾಲೆ ಮತ್ತು ಕಿರಿಯ ಕಾಲೇಜನ್ನು ನಡೆಸುತ್ತಿದೆ. ಈ ಸಂಸ್ಥೆಯು ಶಿಶುಪಾಲನಾ ಕೇಂದ್ರ ಮತ್ತು ಶಿಶು ಅಭಿವೃದ್ಧಿ ಕೇಂದ್ರ, ಪ್ರಾಥಮಿಕ, ಮಾಧ್ಯಮಿಕ, ಶಾಲೆಯೊಂದಿಗೆ ಕಿರಿಯ ಕಾಲೇಜನ್ನು ನಡೆಸಿಕೊಂಡು ಬರುತ್ತಿದೆ. ಶಾಲೆಯಲ್ಲಿ ಸಹಶಿಕ್ಷಣ ಪದ್ದತಿಯಿದ್ದು ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಹಾಗೂ ಉಚ್ಛ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಇದು ಮಹಾರಾಷ್ಟ್ರ ಸರಕಾರದಿಂದ ಅಲ್ಪಸಂಖ್ಯಾತ ಭಾಷಾವಾರು ಶಾಲೆ ಎಂದು ಗುರುತಿಸಲ್ಪಟ್ಟಿದೆ. ಈ ಶಾಲೆಯು ಇಂಗ್ಲೀಷ್ ಮಾಧ್ಯಮದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಹಾಗೂ ಕನ್ನಡ ಮಾಧ್ಯಮದಲ್ಲಿ 5ರಿಂದ 10ನೇ ತರಗತಿಯವರೆಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತಲಿದ್ದು ಶಾಲಾ ಮಾಧ್ಯಮಿಕ ವಿಭಾಗವು ಮಹಾರಾಷ್ಟ್ರ ಸರಕಾರದಿಂದ ಅನುದಾನವನ್ನು ಪಡೆದಿದೆ. ಮತ್ತು ಪ್ರಾಥಮಿಕ ವಿಭಾಗವು ಬ್ರಹತ್ ಮುಂಬಯಿ ಮಹಾನಗರ ಪಾಲಿಕೆಯಿಂದ ಅನುದಾನವನ್ನು ಪಡೆಯುತ್ತಲಿದೆ. ಮಗುವಿನ ಸರ್ವತೋಮುಖ ಬೆಳವಣಿಗೆಯಾಗಲು ವಿದ್ಯಾರ್ಥಿಗೆ ಪಠ್ಯಶಿಕ್ಷಣದೊಂದಿಗೆ ಕಲೆ ಸಾಹಿತ್ಯ , ಸಂಸ್ಕೃತಿ ಹಾಗೂ ಕ್ರೀಡೆಗಳನ್ನು ಒದಗಿಸುವ ಮೂಲಕ ಅವನ ಸರ್ವತೋಮುಖ ಪ್ರಗತಿಯನ್ನು ಸಾಧಿಸುವುದು ಶಾಲೆಯ ಮುಖ್ಯ ಉದ್ದೇಶವಾಗಿದೆ.

 

ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಸ್ಥಾಪನೆ:

ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಅಮೋಘವಾದ ಸಾಧನೆಯನ್ನು ಮಾಡಿ ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಈ ಸಂಸ್ಥೆಯು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಆಧುನಿಕ ಭಾರತದ ನಿರ್ಮಾಣದ ರೂವಾರಿಗಳಲ್ಲೊಬ್ಬರಾದ ಭಾರತರತ್ನ ಸರ್ . ಎಂ.ವಿಶ್ವೇಶ್ವರಯ್ಯನವರ ಮಾರ್ಗದರ್ಶನದಂತೆ 1939ರಲ್ಲಿ ಸ್ಥಾಪಿಸಲ್ಪಟ್ಟಿತು. ಸಂಸ್ಥೆಯ ಸ್ಥಾಪನೆಗೆ ಕಾರಣರಾದವರು ಶ್ರೀ. ಆರ್.ಡಿ.ಚಾರ್, CMD M/S standard Batteries Ltd, M/S IAEC Ltd, M/S MEI Ltd, M/S Fuel injections Ltd, ಶ್ರೀ.ಆರ್.ವಿ. ಮೂರ್ತಿ ಸಂಪಾದಕರು ವಾಣಿಜ್ಯ ಮತ್ತು ಸಮಾಜ ವಿಜ್ಞಾನಿಗಳು, ಶ್ರೀ ಎಂ.ಆರ್. ವರದರಾಜನ್, ಮುಖ್ಯ ಅಭಿಯಂತರರು, ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪೆನಿ ನಿಯಮಿತ, ಶ್ರೀ.ಬಿ.ನಾರಾಯಣ ಸ್ವಾಮಿ, ನ್ಯಾಯವಾದಿಗಳು ಮುಂಬಯಿ ಉಚ್ಚನ್ಯಾಯಾಲಯ, ಮತ್ತು ವಿದ್ವಾನ್ ಗೋಪಾಲಾಚಾರ್ಯ, ಕುಲಪತಿಗಳು ಸತ್ಯದಾನ ವಿದ್ಯಾಪೀಠ ಮತ್ತು ಇನ್ನಿತರರು. ಮಹಾರಾಷ್ಟ್ರ ಸೊಸೈಟಿಸ್ ಆಕ್ಟ್ 1880ಹಾಗೂ ಚಾರಿಟೇಬಲ್ ಪಬ್ಲಿಕ್ ಟ್ರಸ್ಟ್ ಆಕ್ಟ 1950ರ ಪ್ರಕಾರ ನೋಂದಾಯಿಸಲ್ಪಟ್ಟಿದೆ. ಸಂಸ್ಥೆಯ ಮುಖ್ಯ ಉದ್ದೇಶವು ಶಿಕ್ಷಣದಿಂದ ಸಬಲೀಕರಣ ಎಂಬುದಾಗಿದೆ.

 

ಈ ಶಾಲೆಯ ಸಂಸ್ಥೆಯ ಅಧಿನದಲ್ಲಿದ್ದು ಇದರ ನೋಂದಣಿ ಸಂಖ್ಯೆಯು 973/ 1934-40. ಇದು ಚಾರಿಟೇಬಲ್ ಟ್ರಸ್ಟ್ ಕಾಯ್ದೆ 1950ರ ಪ್ರಕಾರ ನೋಂದಾಯಿಸಲ್ಪಟ್ಟಿದೆ. ಇದರ ನೋಂದಾವಣಿ ಸಂಖ್ಯೆಯು F.188(BOM) ಇದಕ್ಕೆ BMCಯು 580-70 M2 6 plots ಗಳನ್ನು ಎನ್.ಕೆ..ಸಂಸ್ಥೆಗೆ ಶಿಕ್ಷಣದ ಉದ್ದೇಶಕ್ಕಾಗಿ ನೀಡಿದೆ. ಸಂಸ್ಥೆಯು ಸುಮಾರು 3484.99.M2 ವಿಸ್ತಾರದ ಭೂಮಿಯನ್ನು ಹೊಂದಿದೆ. ಮತ್ತು 1107.00 M2 ಕ್ಷೇತ್ರದ ಆಟದ ಮೈದಾನವನ್ನು ಹೊಂದಿದೆ. ಸಂಸ್ಥೆಯು 4100 M2 ಕ್ಷೇತ್ರದ ಕಟ್ಟಡವನ್ನು ಹೊಂದಿದೆ. ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉಚ್ಚ ಮಾಧ್ಯಮಿಕ ಶಿಕ್ಷಣವನ್ನು ನೀಡುತ್ತಲಿದ್ದು ಕಳೆದ 8 ವರ್ಷಗಳಿಂದ ಮಹಾರಾಷ್ಟ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯು ನಡೆಸಿಕೊಂಡು ಬರುತ್ತಿರುವ ಎಸ್.ಎಸ್.ಸಿ ಪರೀಕ್ಷೆಯಲ್ಲಿ ಶಾಲೆಯು ಸತತವಾಗಿ ಶೇಕಡಾ 100ಪಲಿತಾಂಶವನ್ನು ಪಡೆದಿದೆ.

ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಲಿದ್ದು ಅದರಲ್ಲಿ 95% ದಷ್ಟು ಮಕ್ಕಳು ಬಡತನ ರೇಖೆಗಿಂತ ಕೆಳಗಿನ ಮಟ್ಟದವರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅವರ ಆರ್ಥಿಕ ಹಿನ್ನೆಲೆಯ ತೊಂದರೆಯನ್ನು ಕೊಡಬಾರದು ಎನ್ನುವ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಸಮನಾದ ಅವಕಾಶಗಳನ್ನು ನೀಡಿ ಅವರ ಪ್ರತಿಭೆಯನ್ನು ತೋರಿಸಲು ಅನುವು ಮಾಡಿಕೊಟ್ಟಿದೆ.

 

ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯು ಭಾಷಾವಾರು ಅಲ್ಪಸಂಖ್ಯಾತ ಸಂಸ್ಥೆಯೆಂದು ಮಹಾರಾಷ್ಟ್ರದಿಂದ ಅಂಗೀಕರಿಸಲ್ಪಟ್ಟ ಸಂಸ್ಥೆಯಾಗಿದೆ. ಮೂಲ ಶಿಕ್ಷಣವನ್ನು ಕೊಡುವ ಮೂಲಕ ತನ್ನ ಉದ್ದೇಶದಲ್ಲಿ ಯಶಸ್ಸನ್ನು ಕಂಡಿದೆ. ಬದಲಾಗುತ್ತಿರುವ ವೈವಿಧ್ಯಮಯ ವ್ಯಾಪಾರಾತ್ಮಕ, ವ್ಯವಹಾರಾತ್ಮಕ ಪರಿಸರಕ್ಕೆ ಹೊಂದಿಕೊಳ್ಳಲು ಬೇಕಾಗುವ ಸಮಾಜದ ಅವಶ್ಯಕತೆಗಳ ಬೇಡಿಕೆಯನ್ನು ಪೂರೈಸಲು ಹಾಗೂ ನಮ್ಮ ತಂತ್ರಜ್ಞಾನದ ಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿ ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಮುಂದಾಳತ್ವ ವಹಿಸುವಂತಹ ಶಿಕ್ಷಣವನ್ನು ಒದಗಿಸುತ್ತಿದೆ.

ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಇನ್ನೊಂದು ಮಹತ್ತರ ಉದ್ದೇಶವೆಂದರೆ ಸವಲತ್ತುಗಳನ್ನು ಸೃಷ್ಟಿಸಿ ಅಭಿವೃದ್ದಿಪಡಿಸುವುದು. ಆ ಮೂಲಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಸಾಮರ್ಥ್ಯ ಪಡೆಯುವಂತೆ ಮಾಡುವುದು.

ಸಂಸ್ಥೆಯು ವಿವಿಧ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ 150 ಸದಸ್ಯರನ್ನು ಹೊಂದಿದೆ. ಸಂಸ್ಥೆಯು ಕಾರ್ಯಕಾರಿ ಸಮಿತಿಯ ಮುಖಾಂತರ ನಡೆಯುತಲಿದ್ದು ಅದರಲ್ಲಿ ಒಬ್ಬರು ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು, ಇಬ್ಬರು ಕಾರ್ಯದರ್ಶಿಗಳು ಮತ್ತು ಒಬ್ಬರು ಕೋಶಾಧಿಕಾರಿಗಳನ್ನೊಳಗೊಂಡ ಒಟ್ಟು ಆರು ಸದಸ್ಯರನ್ನು ಒಳಗೊಂಡಿದೆ. ಪ್ರತೀ ವರ್ಷ ಕಾರ್ಯಕಾರಿ ಸಮಿತಿಯ ಸಂಸ್ಥೆಯ ಅರ್ಹ ಸದಸ್ಯರಿಂದ ಚುನಾಯಿಸಲ್ಪಡುತ್ತಿದ್ದು ಕಾರ್ಯಕಾರಿ ಸಮಿತಿಯ ಕೆಲವು ಸದಸ್ಯರು ಶಿಕ್ಷಣ ಕ್ಷೇತ್ರ ಹಾಗೂ ಸಮಾಜ ಸೇವೆಯಲ್ಲಿ ದೀರ್ಘವಾದ ಸೇವೆಯನ್ನು ಸಲ್ಲಿಸಿದವರಾಗಿದ್ದಾರೆ.

 

 

 

 

 

 

 

 

ಅಧ್ಯಕ್ಷರು

 

ವರ್ಷ ಅಧ್ಯಕ್ಷರ ಹೆಸರು

1939-42 ವಿದ್ವಾನ್ ಮಾಹುಲಿ. ಆರ್.ಗೋಪಾಲಾಚಾರ್ಯ

 

1942-57 ಶ್ರೀ .ಆರ್. ಡಿ. ಚಾರ್

 

1957-64 ಶ್ರೀ.ಎಂ.ಆರ್. ವರದರಾಜನ್

 

1964-78 ಶ್ರೀ ನಾರಾಯಣ ಸ್ವಾಮಿ

 

1978-79 ಶ್ರೀ. ಆರ್.ಎಲ್.ಎನ್. ಅಯ್ಯಂಗಾರ್

 

1979-83 ಶ್ರೀ.ಬಿ.ವಿ.ವೆಂಕಟೇಶ

 

1983-90 ಶ್ರೀ.ಬಿ.ಎನ್.ಶ್ರೀ ಕೃಷ್ಣ

 

1990-96 ಶ್ರೀ ಜಿ.ಡಿ .ಜಿನೇಗೌಡ

 

1996-97 ಶ್ರೀಮತಿ ಉಷಾ ಜೈರಾಮ್

 

1997-2001 ಶ್ರೀಮತಿ ಲೀಲಾ ರಾಜ್ ಕುಮಾರ

 

2001-02 ಶ್ರೀ ಜಿ.ಆರ್.ಆನಂದ

 

2002-03 ಶ್ರೀಮತಿ ಲೀಲಾ ರಾಜ್‌ ಕುಮಾರ

 

2003 ರಿಂದ ಶ್ರೀ ಡಾ. ಎಚ್.ಎಸ್. ಶ್ರೀನಿವಾಸ್

 

ಗೌರವ ಕಾರ್ಯದರ್ಶಿಗಳು:

 

ವರ್ಷ ಗೌರವ ಕಾರ್ಯದರ್ಶಿಗಳ ಹೆಸರು

 

1939- 78 ಶ್ರೀ. ಆರ್. ವೆಂಕಟೇಶ ಮೂರ್ತಿ

 

1978- 79 ಶ್ರೀ.ಪಿ.ಎನ್. ಮೂರ್ತಿ

 

1979- 83 ಶ್ರೀ ಡಿ.ಕೆ.ಆರ್ ರಾವ್

 

1983- 86 ಶ್ರೀ..ಎಸ್.ಕೆ.ರಾವ್

 

1986- 90 ಶ್ರೀ.ಜಿ.ಡಿ.ಜಿನಗೌಡ

 

1990- 2004 ಶ್ರೀ.ಎಸ್.ಸುಬ್ರಮಣಿ

 

2004- 05 ಶ್ರೀ.ಎಸ್.ಕೆ.ಅಯ್ಯಂಗಾರ್

 

2005- 07 ಶ್ರೀ.ಎಸ್. ಸುಬ್ರಮಣಿ

 

2007 ರಿಂದ ಶ್ರೀ.ಬಿ.ಎಸ್. ಸುರೇಶ್

 

ಮುಖ್ಯೋಪಾಧ್ಯಾಯರು

ವರ್ಷ ಮುಖ್ಯೋಪಾಧ್ಯಾಯರ ಹೆಸರು

 

1941- 43 ಶ್ರೀ ಎಚ್.ಕೆ.ಗುಂಡೂರಾವ್

 

1943- 47 ಶ್ರೀ.ಎನ್.ಎನ್.ಮಹಲ್.

 

1947- 50 ಶ್ರೀ.ಸಿ.ಕೃಷ್ಣಸ್ವಾಮಿ

 

1950- 52 ಶ್ರೀ..ಎಸ್.ಭಾಸ್ಕರ

 

1952- 58 ಶ್ರೀ.ಎನ್.ನರಸಿಂಹಯ್ಯ

 

1958- 74 ಶ್ರೀ.ಪಿ.ಎನ್.ಮೂರ್ತಿ

 

1974- 84 ಶ್ರೀಮತಿ ಕೆ.ಹಟ್ಟಂಗಡಿ

 

1984- 87 ಶ್ರೀಮತಿ ಶಶಿಕಲಾ ಆರ್.ಶರ್ಮಾ

 

1987- 92 ಶ್ರೀ ಎಸ್.ರಾಮಚಂದ್ರ ರಾವ್

 

1992-2000 ಶ್ರೀಮತಿ ವಸುಂದರಾ ಆರ್

 

2000ರಿಂದ ಶ್ರೀಮತಿ ಸರೋಜ ರಾವ್